2 ಪೂರ್ವಕಾಲವೃತ್ತಾ 13 : 1 (KNV)
ಅರಸನಾದ ಯಾರೊಬ್ಬಾಮನ ಹದಿನೆಂಟನೇ ವರುಷದಲ್ಲಿ ಅಬೀಯನು ಯೆಹೂದದ ಮೇಲೆ ಆಳಲು ಆರಂಭಿಸಿದನು.
2 ಪೂರ್ವಕಾಲವೃತ್ತಾ 13 : 2 (KNV)
ಅವನು ಯೆರೂಸಲೇಮಿನಲ್ಲಿ ಮೂರು ವರುಷ ಆಳಿದನು. ಅವನ ತಾಯಿಯ ಹೆಸರು ವಿಾಕಾಯ, ಗಿಬೆಯದ ಊರೀಯೇಲನ ಮಗಳು.
2 ಪೂರ್ವಕಾಲವೃತ್ತಾ 13 : 3 (KNV)
ಅಬೀಯ ನಿಗೂ ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು. ಆಗ ಅಬೀಯನು ಯುದ್ಧಸ್ಥರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯಲ್ಪಟ್ಟ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷ ಮಂದಿ ಆಯಲ್ಪಟ್ಟ ಪರಾ ಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು.
2 ಪೂರ್ವಕಾಲವೃತ್ತಾ 13 : 4 (KNV)
ಆಗ ಅಬೀಯನು ಎಫ್ರಾಯಾಮ್ ಬೆಟ್ಟದಲ್ಲಿರುವ ಚೆಮಾರೈ ಎಂಬ ಬೆಟ್ಟದ ಮೇಲೆ ನಿಂತು--ಯಾರೊ ಬ್ಬಾಮನೇ, ಸಮಸ್ತ ಇಸ್ರಾಯೇಲೇ, ನನ್ನ ಮಾತು ಕೇಳಿರಿ.
2 ಪೂರ್ವಕಾಲವೃತ್ತಾ 13 : 5 (KNV)
ಇಸ್ರಾಯೇಲಿನ ದೇವರಾದ ಕರ್ತನು ಇಸ್ರಾ ಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀ ದನಿಗೆ, ಅವನಿಗೂ ಅವನ ಮಕ್ಕಳಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟನೆಂದು ನೀವು ತಿಳಿಯ ತಕ್ಕ ದ್ದಲ್ಲವೋ?
2 ಪೂರ್ವಕಾಲವೃತ್ತಾ 13 : 6 (KNV)
ಆದರೆ ದಾವೀದನ ಮಗನಾದ ಸೊಲೊ ಮೋನನ ಸೇವಕನಾಗಿದ್ದ ನೆಬಾಟನ ಮಗನಾದ ಯಾರೋಬ್ಬಾಮನು ಎದ್ದು ತನ್ನ ಯಜಮಾನನ ಮೇ ತಿರುಗಿಬಿದ್ದಿದ್ದಾನೆ.
2 ಪೂರ್ವಕಾಲವೃತ್ತಾ 13 : 7 (KNV)
ಇದಲ್ಲದೆ ನಿಷ್ಪ್ರಯೋಜಕರಾದ ಬೆಲಿಯಾಳನ ಮಕ್ಕಳು ಅವನ ಬಳಿಗೆ ಕೂಡಿ ಬಂದು ಸೊಲೊಮೋನನ ಮಗನಾದ ರೆಹಬ್ಬಾಮನು ಹುಡುಗ ನಾಗಿಯೂ ಮೃದು ಹೃದಯವುಳ್ಳವನಾಗಿಯೂ ಅವ ರನ್ನು ಎದುರಿಸಲು ಬಲವಿಲ್ಲದೆ ಇರುವಾಗ ಅವ ನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡಿ ದ್ದಾರೆ.
2 ಪೂರ್ವಕಾಲವೃತ್ತಾ 13 : 8 (KNV)
ಈಗ ದಾವೀದನ ಕುಮಾರರ ಕೈಯಲ್ಲಿರುವ ಕರ್ತನ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿ ಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೋಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು.
2 ಪೂರ್ವಕಾಲವೃತ್ತಾ 13 : 9 (KNV)
ನೀವು ಆರೋನನ ಮಕ್ಕಳಾದ ಕರ್ತನ ಯಾಜಕರನ್ನೂ ಲೇವಿ ಯರನ್ನೂ ತಳ್ಳಿ ಹಾಕಿ ದೇಶಗಳ ಜನರ ಹಾಗೆ ನಿಮಗೆ ಯಾಜಕರನ್ನು ಮಾಡಲಿಲ್ಲವೋ? ಯಾವನಾದರೂ ಒಂದು ಎಳೇ ಹೋರಿಯನ್ನೂ ಏಳು ಟಗರುಗಳನ್ನೂ ತಕ್ಕೊಂಡು ಬಂದು ತನ್ನನ್ನು ಪ್ರತಿಷ್ಠೆಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನು.
2 ಪೂರ್ವಕಾಲವೃತ್ತಾ 13 : 10 (KNV)
ನಮಗಾದರೋ ಕರ್ತನು ನಮ್ಮ ದೇವರಾಗಿದ್ದಾನೆ; ನಾವು ಆತನನ್ನು ಬಿಡಲಿಲ್ಲ. ಇದಲ್ಲದೆ ಕರ್ತನಿಗೆ ಸೇವೆಮಾಡುವ ಯಾಜಕರು ಆರೋನನ ಮಕ್ಕಳು; ಲೇವಿಯರು ತಮ್ಮ ಕೆಲಸದಲ್ಲಿ ಇದ್ದಾರೆ.
2 ಪೂರ್ವಕಾಲವೃತ್ತಾ 13 : 11 (KNV)
ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.
2 ಪೂರ್ವಕಾಲವೃತ್ತಾ 13 : 12 (KNV)
ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು.
2 ಪೂರ್ವಕಾಲವೃತ್ತಾ 13 : 13 (KNV)
ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆಯೂ ಬರಮಾಡಿದನು. ಆದದರಿಂದ ಅವರು ಯೆಹೂದ ದವರ ಮುಂದೆಯೂ ಅಡಗಿಕೊಂಡವರು ಅವರ ಹಿಂದೆಯೂ ಇದ್ದರು.
2 ಪೂರ್ವಕಾಲವೃತ್ತಾ 13 : 14 (KNV)
ಯೆಹೂದದವರು ಹಿಂದಕ್ಕೆ ನೋಡಿದಾಗ ಇಗೋ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಅವರು ಕರ್ತನಿಗೆ ಕೂಗಿದರು, ಯಾಜಕರು ತುತೂರಿಗಳನ್ನು ಊದಿದರು.
2 ಪೂರ್ವಕಾಲವೃತ್ತಾ 13 : 15 (KNV)
ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು.
2 ಪೂರ್ವಕಾಲವೃತ್ತಾ 13 : 16 (KNV)
ಇಸ್ರಾಯೇಲಿನ ಮಕ್ಕಳು ಯೆಹೂದದವರ ಎದುರಿ ನಿಂದ ಓಡಿಹೋದರು. ದೇವರು ಅವರನ್ನು ಅವರ ಕೈಯಲ್ಲಿ ಒಪ್ಪಿಸಿದನು.
2 ಪೂರ್ವಕಾಲವೃತ್ತಾ 13 : 17 (KNV)
ಅಬೀಯನೂ ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿ ದರು. ಇಸ್ರಾಯೇಲಿನವರಲ್ಲಿ ಐದು ಲಕ್ಷ ಮಂದಿ ಆಯಲ್ಪಟ್ಟವರು ಹತವಾದರು.
2 ಪೂರ್ವಕಾಲವೃತ್ತಾ 13 : 18 (KNV)
ಹೀಗೆ ಆ ಕಾಲದಲ್ಲಿ ಇಸ್ರಾಯೇಲಿನ ಮಕ್ಕಳು ತಗ್ಗಿಸಲ್ಪಟ್ಟರು. ಯೆಹೂದನ ಮಕ್ಕಳು ತಮ್ಮ ಪಿತೃಗಳ ದೇವರಾದ ಕರ್ತನ ಮೇಲೆ ಆತುಕೊಂಡಿದ್ದರಿಂದ ಜಯಹೊಂದಿದರು.
2 ಪೂರ್ವಕಾಲವೃತ್ತಾ 13 : 19 (KNV)
ಅಬೀ ಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣ ಗಳನ್ನೂ ಅವುಗಳ ಗ್ರಾಮಗಳನ್ನೂ ತೆಗೆದುಕೊಂಡನು.
2 ಪೂರ್ವಕಾಲವೃತ್ತಾ 13 : 20 (KNV)
ಯಾರೊಬ್ಬಾಮನು ಅಬೀಯನ ದಿನಗಳಲ್ಲಿ ತಿರಿಗಿ ಶಕ್ತಿಯನ್ನು ಹೊಂದಲಿಲ್ಲ. ಕರ್ತನು ಅವನನ್ನು ಹೊಡೆ ದದ್ದರಿಂದ ಅವನು ಸತ್ತನು.
2 ಪೂರ್ವಕಾಲವೃತ್ತಾ 13 : 21 (KNV)
ಆದರೆ ಅಬೀಯನು ಬಲಗೊಂಡು ಹದಿನಾಲ್ಕು ಮಂದಿ ಹೆಂಡತಿಯರನ್ನು ಮದುವೆಮಾಡಿಕೊಂಡು ಇಪ್ಪತ್ತೆರಡು ಮಂದಿ ಕುಮಾರರನ್ನೂ ಹದಿನಾರು ಮಂದಿ ಕುಮಾರ್ತೆಯರನ್ನೂ ಪಡೆದನು.
2 ಪೂರ್ವಕಾಲವೃತ್ತಾ 13 : 22 (KNV)
ಅಬೀ ಯನ ಮಿಕ್ಕಾದ ಕ್ರಿಯೆಗಳೂ ಅವನ ನಡತೆಗಳೂ ಮಾತುಗಳೂ ಪ್ರವಾದಿಯಾದ ಇದ್ದೋನನ ವರ್ತ ಮಾನಗಳಲ್ಲಿ ಬರೆಯಲ್ಪಟ್ಟಿವೆ.
❮
❯